ಅಭಿಪ್ರಾಯ / ಸಲಹೆಗಳು

ಮಹಿಳಾ ಸಹಾಯ ಕೇಂದ್ರ ಅಧಿಕಾರಿಗಳು

ಮಹಿಳಾ ಸಹಾಯಕ ಕೇಂದ್ರದ ಅಧಿಕಾರಿಗಳು:


ಪರಿಚಯ:


ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳನ್ನು ಸುರಕ್ಷಿತವಾಗಿಸುವ ಸಲುವಾಗಿ, ಗೃಹ ಸಚಿವಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಯಾವುದೇ ಲಿಂಗಾಧಾರಿತ ಹಿಂಸೆ ಮತ್ತು ದೌರ್ಜನ್ಯಗಳಿಂದ ಹೊರತಾದ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಸುವ ಸಲುವಾಗಿ ನಿರ್ಭೀತ, ಸುರಕ್ಷಿತ & ಸಬಲ ವಾತಾವರಣವನ್ನು ಸೃಷ್ಟಿಸಲು ನಿರ್ಭಯ ನಿಧಿ ಯೋಜನೆಯಡಿ ಸುರಕ್ಷಿತ ನಗರ ಯೋಜನೆಯನ್ನು ಆರಂಭಿಸಿದೆ. ಮುಂದುವರೆದು ಸದರಿ ಯೋಜನೆಯು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ನಗರ ಮೂಲ ಸೌಕರ್ಯಗಳನ್ನು ಮತ್ತು ಸಮರ್ಥವಾಗಿ ಕಾನೂನು ಜಾರಿ ಮಾಡುವ ಏಜೆನ್ಸಿಗಳನ್ನು ಸಂಪರ್ಕಿಸುವ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಮಹಿಳೆಯರ ಮತ್ತು ಮಕ್ಕಳ ವಿರುದ್ದದ ಎಲ್ಲಾ ವಿಧದ ಅಪರಾಧಗಳನ್ನು ತಡೆಗಟ್ಟುವ ಮತ್ತು ನಿಗ್ರಹಿಸುವ ಗುರಿ ಹೊಂದಿದೆ. ನಿರ್ಭಯ ನಿಧಿಯ ಅಡಿಯಲ್ಲಿ ಮೊದಲ ಹಂತದಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ಅಂದಾಜು ವೆಚ್ಚ ರೂ 2919.55 ಕೋಟಿಗಳಲ್ಲಿ 8 ನಗರಗಳನ್ನು ಗುರುತಿಸಲಾಗಿದೆ., ಅವುಗಳೆಂದರೆ ದೆಹಲಿ, ಕೊಲ್ಕತ್ತಾ, ಮುಂಬೈ, ಚೆನೈ, ಬೆಂಗಳೂರು.

 

           ಬೆಂಗಳೂರು ನಗರ ಪೊಲೀಸರಿಗೆ ವಿವಿಧ ಘಟಕಗಳಿಗೆ ರೂ. 667 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಮಹಿಳಾ ಸಹಾಯ ಕೇಂದ್ರಗಳೂ ಸಹ ಅದರಲ್ಲಿ ಒಂದು ಘಟಕವಾಗಿದೆ. ಇದು ಬೆಂಗಳೂರಿನ ಸಾರ್ವಜನಿಕ ಮಹಿಳೆಯರು ಮಹಿಳಾ ದೂರುದಾರರು ಮತ್ತು ಪೊಲೀಸರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಅನನ್ಯ ಉಪಕ್ರಮವಾಗಿದೆ.
ಎಲ್ಲಾ 220 ಮಹಿಳಾ ಸಿವಿಲ್ ಡಿಫೆನ್ಸ್ ವಾರ್ಡನ್ಗಳನ್ನು ಬೆಂಗಳೂರು ನಗರದ 110 ಪೊಲೀಸ್ ಠಾಣೆಗಳಲ್ಲಿ ಎರಡು ಪಾಳಿಯಲ್ಲಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ.

ವಸ್ತುನಿಷ್ಠ :


ಸಾಮಾನ್ಯವಾಗಿ ಭಾರತದ ಮಹಿಳೆಯರು ತಮ್ಮ ಮನಸ್ಸಿನಲ್ಲಿರುವ ಪೊಲೀಸ್ ಠಾಣೆಯ ರೂಡಿಗತ ಚಿತ್ರಣದಿಂದಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಲು ಬಯಸುವುದಿಲ್ಲ. ಈ ಉಪಕ್ರಮವು ಆ ರೂಡಿಗತ ಮಾದರಿಯನ್ನು ಮುರಿಯುವ ಮತ್ತು ಪೊಲೀಸ್ ಠಾಣೆಗಳನ್ನು ಹೆಚ್ಚು ಜನ ಸ್ನೇಹಿಯಾಗಿಸುವ ಒಂದು ಹೆಜ್ಜೆಯಾಗಿದೆ.


       ಮಾನಸಿಕ ಪ್ರಥಮ ಚಿಕಿತ್ಸೆ ಸಂವಹನ ಮತ್ತು ಸಂಕಷ್ಟ ನಿರ್ವಹಣೆಯಲ್ಲಿ ತರಬೇತಿ ಪಡೆದ ಇಲಾಖೆಯ ಹೊರಗಿನ ಮಹಿಳಾ ಸ್ವಯಂ ಸೇವಕರು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಭಾವಿಸಲಾಗಿದೆ. ಅವರು ಸಂಕಷ್ಟದಲ್ಲಿರುವ ಮಹಿಳೆಯರೊಂದಿಗೆ ವ್ಯವಹರಿಸಲು ಹೆಚ್ಚು ಸಜ್ಜಾಗಿರುತ್ತಾರೆ ಮತ್ತು ಅವರೊಂದಿಗೆ ಉತ್ತಮವಾಗಿ ಸಹಾನುಭೂತಿ ಹೊಂದಲು ಸಾಧ್ಯವಾಗುತ್ತದೆ.


           ಇ ಎಪ್‌ ಸಿ (ಖರ್ಚು ಹಣಕಾಸು ಸಮಿತಿ) ಜ್ಞಾಪಕ ಪ್ರಕಾರ, ಈ ಸಹಾಯ ಕೇಂದ್ರಗಳ ಆದೇಶವು ಮುಖ್ಯವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅವರ ವೈಯಕ್ತಿಕ ವಿಚಾರ, ಗೌಪ್ಯತೆ ಮತ್ತು ಗೌರವವನ್ನು ಕಾಪಾಡಿಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿ ಸಲಹೆ ನೀಡುವುದು ಆಗಿದೆ.
ಈ ಉದ್ದೇಶಕ್ಕಾಗಿ ಮಹಿಳಾ ಸಿವಿಲ್ ಡಿಫೇನ್ಸ್ ವಾರ್ಡನ್ ಅನ್ನು ಆಯ್ಕೆ ಮಾಡಿ ಅವರನ್ನು ಮಹಿಳೆಯರಿಗೆ ಸಂಬಂಧಿಸಿದ ಕಾನೂನು ನಿಬಂಧನೆಗಳು, ಮಹಿಳೆಯರಿಗಾಗಿ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಮಾನಸಿಕ ಪ್ರಥಮ ಚಿಕಿತ್ಸೆ, ಸಂವಹನ ಕೌಶಲ್ಯ ಮತ್ತು ಸ್ವ ಆರೈಕೆ ಕುರಿತಾದ ವಿಷಯಗಳಲ್ಲಿ ತರಬೇತಿಯನ್ನು  ನೀಡಲಾಗಿದೆ.

ಇತ್ತೀಚಿನ ನವೀಕರಣ​ : 26-08-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ