ಅಭಿಪ್ರಾಯ / ಸಲಹೆಗಳು

ನಾವು ಸೇವೆ ಸಲ್ಲಿಸುತ್ತೇವೆ ನಾವು ರಕ್ಷಿಸುತ್ತೇವೆ

ಬೆಂಗಳೂರು ನಗರವು ಜುಲೈ 4,1963 ರಂದು ಪೊಲೀಸ್ ಕಮೀಷನರೇಟ್ ಪದ್ದತಿಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿತ್ತು, ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ ಆಪ್ ಪೊಲೀಸ್(ಡಿ.ಐ.ಜಿ.ಪಿ) ಶ್ರೇಣಿಯ ಅಧಿಕಾರಿಯನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಯಿತು. ಶ್ರೀ ಸಿ ಚಾಂಡಿ ಐಪಿಎಸ್ ರವರು ಜುಲೈ 1963 ರಂದು ಬೆಂಗಳೂರು ನಗರದ ಮೊದಲ ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡು ಕಾರ್ಯ ನಿರ್ವಹಿಸಿದರು.

 

1976 ರ ವರೆಗೂ ಸಹ ಡಿ.ಐ.ಜಿ.ಪಿ ಶ್ರೇಣಿಯ ಅಧಿಕಾರಿಯನ್ನೆ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗುತಿತ್ತು.1976 ರಿಂದ 1989 ರವರೆಗೆ ಐಜಿಪಿ ಶ್ರೇಣಿಯ ಅಧಿಕಾರಿಗಳನ್ನು ಆಯುಕ್ತರ ಹುದ್ದೆಗೆ ಪರಿಗಣಿಸಲಾಗುತ್ತಿತು. ತದನಂತರ ಹಾಲಿ ಈ ಶ್ರೇಣಿಯ ಅಧಿಕಾರಿಗಳನ್ನು ಬೆಂಗಳೂರು ಆಯುಕ್ತರ ಹುದ್ದೆಗೆ ನೇಮಕ ಮಾಡಲಾಗುತ್ತಿದೆ. ಶ್ರೀ ಕಮಲ ಪಂತ್ ಐಪಿಎಸ್ ನಗರದ 36 ನೇ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ

 

ಪ್ರಾರಂಭದಲ್ಲಿ ಬೆಂಗಳೂರು ಪೊಲೀಸ್ ಒಂದು ಸಣ್ಣ ಘಟಕವಾಗಿದ್ದು, ಇಂದು ದೇಶದಲ್ಲೇ ಅತಿದೊಡ್ಡದಾದ ಅಂದರೆ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯುಳ್ಳ ಮೇಟ್ರೋಪಾಲಿಟನ್ ಪೊಲೀಸ್ ಘಟಕವಾಗಿದೆ.ಐ.ಟಿ. ಉದ್ಯಮ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಿಂದಾಗಿ ಬೆಂಗಳೂರು ನಗರವು ವೇಗವಾಗಿ ಬೆಳೆವಣಿಗೆಯಾಗುತ್ತಿದ್ದು, ಬೆಂಗಳೂರು ನಗರಕ್ಕೆ ಹೊಸ ಹೊಸ ಪ್ರದೇಶಗಳು ಅತಿಕಡಿಮೆ ಅವಧಿಯಲ್ಲಿ ನಗರ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಬೆಂಗಳೂರು ನಗರವು ಹಾಲಿ 111 ಕಾನೂನು ಮತ್ತು ಸುವ್ಯಸ್ಥೆ, 2 ಮಹಿಳಾ, 1ಸೈಬರ್ ಪೊಲೀಸ್ ಠಾಣೆ.8 ಸಿಇಎನ್ ಪೊಲೀಸ್ ಠಾಣೆ ಹಾಗೂ 44 ಸಂಚಾರ ಪೊಲೀಸ್ ಠಾಣೆಗಳನ್ನು ಹೊಂದಿದೆ.

 

ಬೆಂಗಳೂರು ನಗರ ಪೊಲೀಸ್ ಇಲಾಖೆಯು ಪ್ರತಿ ವರ್ಷವು ಹೊಸ ಹೊಸ ಜನಹಿತ ಯೊಜನೆಗಳನ್ನು ಹಾಗೂ ನೂತನ ಆವಿಷ್ಕಾರದ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ತನ್ನ ಘನತೆಯನ್ನು ವೃದ್ದಿಸಿಕೊಳ್ಳುತ್ತಿದೆ.

 

ತನ್ನ ಧೇಯೋದ್ದೇಶಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದಕ್ಕಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯು ನಿರಂತರವಾಗಿ ಶ್ರಮಿಸುತ್ತಿದೆ. ಈ ಬೃಹತ್ ನಗರದ ಜನತೆಗೆ ನಿಷ್ಕಂಳಕ ಸೇವೆಯನ್ನು ಈ ಘಟಕವು ನೀಡುತ್ತಿದ್ದು, ರಾಷ್ಟ್ರದಲ್ಲೆ ಉತ್ತಮ ಪೊಲೀಸ್ ಘಟಕವೆಂದು ಖ್ಯಾತಿಯನ್ನು ಪಡೆದಿದೆ.

ಇತ್ತೀಚಿನ ನವೀಕರಣ​ : 16-04-2022 04:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ