ಅಭಿಪ್ರಾಯ / ಸಲಹೆಗಳು

ಪೊಲೀಸ್ ಆಯುಕ್ತರವರ ಸಂದೇಶ

ಶ್ರೀ.ಕಮಲ್ ಪಂತ್ ಐ.ಪಿ.ಎಸ್
ಪೊಲೀಸ್ ಆಯುಕ್ತರು
ಬೆಂಗಳೂರು ನಗರ.

ನಮ್ಮ ಪ್ರೀತಿಯ ಬೆಂಗಳೂರು ನಾಗರೀಕರೆ,

ಬೆಂಗಳೂರಿನಂತಹ ಬೃಹತ್ ಮಹಾನಗರದಲ್ಲಿ ಪೊಲೀಸ್ ಕರ್ತವ್ಯ ನಿರ್ವಹಣೆ ಅತ್ಯಂತ ಕಠಿಣ ಸವಾಲಿನ ಕೆಲಸ. ಆದರೂ, ಈ ಜವಾಬ್ದಾರಿಯುತ ಹುದ್ದೆಯನ್ನು ನಮಗೆ ವಹಿಸಿರುವುದಕ್ಕೆ ತುಂಬ ಗೌರವ ಮತ್ತು ಹೆಮ್ಮೆ ಎನಿಸುತ್ತದೆ. ತಮ್ಮೆಲ್ಲರ ಸಕ್ರೀಯ ಸಹಕಾರವಿಲ್ಲದೆ ಇದನ್ನೆಲ್ಲ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ತಮ್ಮೆಲ್ಲರಿಗೂ ತಿಳಿಸಬಯಸುತ್ತೇವೆ.

ನಮ್ಮ ಮುಂದೆ ಸವಾಲುಗಳು ಅನೇಕ; ನಿರೀಕ್ಷೆ ಅಪಾರ; ಆದರೆ ಸಂಪನ್ಮೂಲದ ಕೊರತೆ ಇದೆ. ಈ ಅಂತರವನ್ನು ಕಡಿಮೆಗೊಳಿಸಲು, ತಾವುಗಳು ಅಗತ್ಯ ಬಿದ್ದಾಗ ತಮ್ಮ ಅಮೂಲ್ಯ ಸಹಕಾರ ನೀಡುತ್ತೀರೆಂಬ ಭರವಸೆ ಇದೆ. ನಾಗರೀಕರು ತಮ್ಮ ಜವಾಬ್ದಾರಿಯನ್ನು ಮನಗಂಡು ಈ ನೆಲದ ಕಾನೂನನ್ನು ಗೌರವಿಸುವ ಮತ್ತು ನಿಯಮ ಪಾಲಿಸುವ ಮಹತ್ತರ ಹೊಣೆಗಾರಿಕೆಗಿಂತ ಇನ್ನು ಏನು ಹೆಚ್ಚಿನದನ್ನು ನಾವು ನಿಮ್ಮಿಂದ ನಿರೀಕ್ಷಿಸಲು ಸಾಧ್ಯ !

ನಾಗರೀಕರು ಅದರಲ್ಲೂ ಮಕ್ಕಳ ಮತ್ತು ಮಹಿಳೆಯರ ಸಂರಕ್ಷಣೆ ನಮ್ಮ ಆದ್ಯತೆ. ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ಅವುಗಳ ಸಂಕೀರ್ಣ ಸ್ವರೂಪದ ಬಗ್ಗೆ ಸಹ ನಾವು ಹೆಚ್ಚಿನ ನಿಗಾ ವಹಿಸಬೇಕಾಗಿರುತ್ತದೆ. ಇದಕ್ಕಾಗಿ  ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆಯನ್ನು ದಿನಾಂಕ:25/03/2017 ರಂದು ಪ್ರಾರಂಭಿಸಲಾಗಿದೆ.

ನಗರದಾದ್ಯಂತ ಸಂಚಾರ ಸರಳೀಕರಣವೂ ಸಹ ನಮ್ಮ ಮತ್ತೊಂದು ಆದ್ಯತೆ ವಿಷಯವಾಗಿರುತ್ತದೆ. ಮೂಲಭೂತ ಸೌಕರ್ಯ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಿಸುವವರೆಗೂ ಈ ಹಾದಿಯು ಸುಗಮವಾಗಿರುವುದಿಲ್ಲ ಎಂಬುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯ. ಸಂಚಾರ ಪೊಲೀಸರು ಇರಲಿ ಅಥವ ಇಲ್ಲದಿರಲಿ ನಾಗರೀಕರು ತಮ್ಮ ಜವಾಬ್ದಾರಿ ಅರಿತುಕೊಂಡು ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸುವುದರ ಮೂಲಕ ಬೆಂಗಳೂರು ನಗರದ ಘನತೆಗೆ ಕೊಡುಗೆ ನೀಡುತ್ತೀರ ಎಂದು ಭಾವಿಸಿದರೆ ತಪ್ಪೇನಿಲ್ಲ. ನಾವು ಸಂಚಾರ ನಿಯಮಗಳನ್ನು ಕೇವಲ ದಂಡ ಕಟ್ಟುವುದನ್ನು ತಪ್ಪಿಸುವ ಸಲುವಾಗಿ ಮಾತ್ರ ಪಾಲಿಸದೆ ಇದು ನಮ್ಮ ಕರ್ತವ್ಯ ಹಾಗೂ ಇದರಲ್ಲಿನ ನಿಯಮಗಳು ನಮ್ಮ ಸುರಕ್ಷತೆಗಾಗಿ ಎಂಬುದನ್ನು ನಾಗರೀಕರು ಮನಗಾಣಬೇಕು.

ಪಾರದರ್ಶಕತೆ ಹಾಗೂ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ, ಅತ್ಯುನ್ನತ ತಂತ್ರಜ್ಞಾನ ಉಪಕರಣಗಳಾದ, ಸರ್ವೇಲೆನ್ಸ್ ಕ್ಯಾಮೆರ, ನವೀಕೃತ ನಮ್ಮ-112 ಸೇವೆ ಹಾಗೂ ಇನ್ನಿತರ ನಾಗರೀಕ ಸೌಲಭ್ಯಗಳನ್ನು ಉನ್ನತೀಕರಿಸುವ ಮಹತ್ವಾಕಾಂಕ್ಷೆಯೊಂದಿಗೆ ಧೃಡ ಹೆಜ್ಜೆ ಮುಂದಿ ಸಮಯವನ್ನು (Response Time) ಇನ್ನೂ ಕಡಿಮೆಗೊಳಿಸುವುದು ಹಾಗೂ ಹೊಯ್ಸಳ ವಾಹನಗಳು 24/7 ಗಂಟೆಗಳು ಲಭ್ಯವಿರುವಂತೆ ಹಾಗೂ ವಾಹನ ಸಂಖ್ಯೆಗಳನ್ನು ಹೆಚ್ಚಳಗೊಳಿಸುವ ಯೋಜನೆ ಇದೆ.

ಸಾಮಾಜಿಕ ಮಾಧ್ಯಮಗಳ ಸಹಕಾರದೊಂದಿಗೆ ನಾಗರೀಕರ ಭಾಗವಹಿಸುವಿಕೆಯನ್ನು ಬಲವರ್ಧನೆಗೊಳಿಸುವ ಪರಿಕಲ್ಪನೆಯೊಂದಿಗೆ, ಸಾರ್ವಜನಿಕ ಸಹಭಾಗಿತ್ವವನ್ನು (Empowerment) ನೀಡಿ ಇದನ್ನು ಇನ್ನಷ್ಟು ವಿಸ್ತøತಗೊಳಿಸಬೇಕೆಂಬ ಆಶಯವಿದೆ.

ನಮ್ಮ ಸಿಬ್ಬಂದಿಗಳಲ್ಲಿ ಮನೆ ಮಾಡಿರುವ ಸಿನಿಕತನವನ್ನು ಹೊರದಬ್ಬಿ, ಮನೋಸ್ಥೈರ್ಯವನ್ನು ಹುರಿದುಂಬಿಸಿ, ನಾಗರೀಕರ ಕ್ಷೇಮ ಹಾಗೂ ಸಂರಕ್ಷಣೆ ಕಡೆಗೆ ಹೆಚ್ಚಿನ ನಿಗಾ ವಹಿಸುವಂತೆ ಅವರಲ್ಲಿ ಸಕಾರಾತ್ಮಕ ಜಾಗೃತಿ ಮೂಡಿಸುವ ಕಾರ್ಯ ಅತ್ಯವಶ್ಯಕವಾಗಿ ಆಗಬೇಕಾಗಿದೆ.

ನಮ್ಮ ಮುಂದಿನ ಗುರಿ ಆಧುನಿತ ತಂತ್ರಜ್ಞಾನ ನೆರವಿನೊಂದಿಗೆ ಕಾರ್ಯಸೂಚಕ ಅವಧಿ (Gesture Period) ನ್ನು…ಆದಷ್ಟು ಕಡಿಮೆಗೊಳಿಸಲು ಕಾರ್ಯತತ್ಪರರಾಗುವುದು ಹಾಗೂ ಮೆಗಾಸಿಟಿ ಮತ್ತು ಬಿ-ಟ್ರ್ಯಾಕ್ ಅಡಿಯಲ್ಲಿ ಒದಗಿಸಲಾದ ಅನುದಾನವನ್ನು ಪರಿಣಾಮಕಾರಿಯಾಗಿ ವಿನಿಯೋಗಗೊಳಿಸುವುದು.

ನಮ್ಮ ಕಾರ್ಯತಂತ್ರವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ, ಅವರೊಂದಿಗೆ ಬೆರೆಯುವ ಮತ್ತು ಸಾರ್ವಜನಿಕ ಸಹಭಾಗಿತ್ವ ವೃದ್ದಿಸುವ ನಮ್ಮ ಹಲವಾರು ಉಪಕ್ರಮಗಳಲ್ಲಿ ಈ ಜಾಲತಾಣವು (website) ಒಂದು ಎಂದು ತಿಳಿಸಬಯಸುತ್ತೇವೆ.

ಜಾಲತಾಣ ವಿಹಾರ ಸಂತೋಷಮಯವಾಗಿರಲಿ!!

ಶ್ರೀ.ಕಮಲ್ ಪಂತ್ ಐ.ಪಿ.ಎಸ್

ಇತ್ತೀಚಿನ ನವೀಕರಣ​ : 30-03-2022 12:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ